ಎಕ್ಟೋಪ್ರಾಕ್ಟ

	ಈ ವಂಶಕ್ಕೆ ಸೇರಿದ ಪ್ರಾಣಿಗಳು ಸೂಕ್ಷ್ಮ ಜೀವಿಗಳು, ತೊಟ್ಟು ಇರುವ ಸಂಘಜೀವಿಗಳು. ಇವು ದೇಹಾವಕಾಶವನ್ನು (ಸೀಲೊಮ್) ಹೊಂದಿವೆ. ಇವು ತಾವೇ ಸ್ರವಿಸಿರುವ ಲೋಳೆಯಂತಿರುವ ವಸ್ತುವಿಗೂ ಅಥವಾ ಗಟ್ಟಿಯಾದ ಹೊರಕವಚಕ್ಕೋ ಅಂಟಿಕೊಂಡಿರುತ್ತವೆ. ಇವಕ್ಕೆ ಅರ್ಧ ಚಂದ್ರಾಕೃತಿಯ ಶಿರಾಸ್ತ್ರ (ಲೋಪೊಫೋರ್) ಇದೆ. ಜೀರ್ಣಾಂಗ ಬಾಗಿದೆ. ಬಾಯಿ ಮತ್ತು ಗುದರಂಧ್ರಗಳೆರಡೂ ಒಂದರ ಹತ್ತಿರ ಮತ್ತೊಂದಿವೆ. ವಿಸರ್ಜನಾಂಗಗಳಾಗಲಿ ರಕ್ತಪರಿಚಲನಾಂಗಗಳಾಗಲಿ ಇಲ್ಲ.

	ಎಕ್ಟೋಪ್ರಾಕ್ಟಗಳಲ್ಲಿ ಹೆಚ್ಚಿನ ವೈವಿಧ್ಯ ಇದೆ. ಜಿಮ್‍ನೋಲೆಮಾಟ ವರ್ಗ, ಫೈಲಾಕ್ಟೋಲೆಮಾಟ ವರ್ಗ ಎಂದು ಇವನ್ನು ಎರಡು ವರ್ಗಗಳಾಗಿ ವಿಭಾಗಿಸಲಾಗಿದೆ. ಮೊದಲನೆ ವರ್ಗದ ಪ್ರಾಣಿಗಳೆಲ್ಲ ಕಡಲವಾಸಿಗಳು. ಎರಡನೆಯ ವರ್ಗಕ್ಕೆ ಸಿಹಿ ನೀರಿನಲ್ಲಿ ವಾಸಿಸುವ ಬ್ರಯೋeóÉೂವಗಳೆಲ್ಲ ಸೇರಿವೆ.

	ಹೆಚ್ಚು ವೈವಿಧ್ಯವನ್ನು ಹೊಂದಿದ್ದರೂ ಎಕ್ಟೋಪ್ರಾಕ್ಟಕ್ಕೆ ಸೇರಿದ ಪ್ರಾಣಿಗಳಿಗೆ ತಮ್ಮದೆ ಆದ ವೈಶಿಷ್ಟ್ಯಗಳುಂಟು. ಇವುಗಳಲ್ಲಿ ಬಹು ಪಾಲು ಸಂಘಜೀವಿಗಳು. ಇವು ಪ್ರಧಾನವಾಗಿ ಸಮುದ್ರದಲ್ಲಿರುತ್ತವೆ. ಕೆಲವು ಸಿಹಿ ನೀರಿನಲ್ಲೂ ಜೀವಿಸುತ್ತವೆ. ಉತ್ತರ ಸಮುದ್ರದಿಂದ ಹಿಡಿದು ದಕ್ಷಿಣ ಸಮುದ್ರದವರೆಗೆ ಇವು ಹರಡಿರುತ್ತವೆ. ಈ ಸಂಘ ಜೀವಿಗಳ ಗುಂಪನ್ನು ಜûುಆರಿಯಂ ಎಂದು ಕರೆಯುತ್ತಾರೆ. ಜûುಆರಿಯಂ ಹಲವಾರು ರೀತಿಯ ಗಟ್ಟಿ ವಸ್ತುಗಳಿಗೆ ಅಂದರೆ ಕಲ್ಲು, ಮೃದ್ವಂಗಿಗಳ ಚಿಪ್ಪು, ಪಾಚಿ, ಹಡಗುಗಳ ಹೊರಮೈ, ಹಡಗು ನಿಲ್ದಾಣದ ಆಸರೆಗಳು ಮೊದಲಾದ ವಸ್ತುಗಳಿಗೆ ಅಂಟಿಕೊಂಡಿರುತ್ತದೆ. ಕೆಲವು ಪ್ರಭೇದಗಳು (ಮೆಂಬ್ರನಿಪೊರ) ನೀರಿನಲ್ಲಿರುವ ಪಾಚಿಗೆ ಅಂಟಿರುವುದುಂಟು. ಎಕ್ಟೋಪ್ರಾಕ್ಟ ಜೀವಿಗಳು ಉದ್ದವಾಗಿರಬಹುದು, ಹಬ್ಬಿಕೊಂಡಿರುವುದು, ಅಂಟಿಕೊಂಡಿರಬಹುದು ಅಥವಾ ಮೃದ್ವಂಗಿಗಳ ಮತ್ತು ಬ್ರಾಕಿಯೋಪಾಡ್‍ನ ಚಿಪ್ಪುಗಳ ಒಳಗೆ ಕೊರೆದು ಹೊಕ್ಕಿರಬಹುದು. ಅಂಟಿಕೊಂಡಿರುವುದಾದರೆ ಒಂದೇ ಪದರವಾಗಿರಬಹುದು ಅಥವಾ ಹಲವಾರು ಪದರದಿಂದ ಕೂಡಿರಬಹುದು. ಹಲವಾರು ಪದರವಿದ್ದರೆ ಸಾಕಷ್ಟು ದಪ್ಪವಾಗಿರುವುವು. ಉದ್ದವಾಗಿದ್ದರೆ ಜಡೆಯಾಕಾರದಲ್ಲಿರುವುವು. ಕವಲೊಡೆದ ಕೊಳವೆಯಂತೆಯೂ ಇರಬಹುದು. ಏಕರೀತಿಯ ಆಕಾರ ಹೊಂದಿದ್ದರೆ ಬಲೆಯಂತೆ ಇರಬಹುದು.

ಚಿತ್ರ - ಂ ಎಕ್ಟೋಪ್ರಾಕ್ಟ ಜೀವಿಯ ದೇಹರಚನೆ: 1. ಬಾಯಿ, 2.ಗ್ಯಾಂಗ್ಲಿಯಾನ್, 3. ಗುದದ್ವಾರ, 4.ಕರುಳು, 5. ಅಂಡಾಶಯ, 6.ಜಠರ, 7. ಅಂಡಾಶಯ, 8. ಫ್ಯುನಿಕ್ಯುಲಸ್, 9. ವೃಷಣ, 10.ಶರೀರದ ಗೋಡೆ, 11.ಗಂಟಲು.
ಚಿತ್ರ - ಃ ಬ್ಯುಗುಲದ ಆವಿಕ್ಯುಲೇರಿಯಂ 1. ಕೊಕ್ಕು, 2. ದವಡೆ, 3. ಆಕ್ಲೂಪ¸+ï ಮಾಂಸಖಂಡ, 4. ಡಿವೇರಿಕೇಟರ್ ಮಾಂಸಖಂಡ, 5. ತೊಟ್ಟು, 6. ಒಳಾಂಗಣ

	ಪ್ರತಿ ಸಂಘಜೀವಿಯಲ್ಲೂ ಒಂದೇ ನಮೂನೆಯ ರಚನೆ ಕಾಣುತ್ತದೆ. ಜûುಆರಿಯಂ ಹಲವಾರು ಜûುಯಿಡ್‍ಗಳ ಸಂಘಟನೆಯಿಂದ ಆಗಿದೆ. ಈ ಜûುಯಿಡ್‍ಗಳು ಸೂಕ್ಷ್ಮಜೀವಿಗಳು. ಕೇವಲ ಕೆಲವೇ ಮಿಲಿಮೀಟರ್ ಉದ್ದವಾಗಿರುತ್ತವೆ. ಪ್ರತಿ ಜûುಯಿಡ್‍ಗೂ ಎರಡು ಪದರಗಳ ಹೊರಕವಚವಿದೆ. ಇದಕ್ಕೆ ಜûುಯೀಷಿಯಂ ಎನ್ನುತ್ತಾರೆ. ಈ ಜûುಯೀಷಿಯಂನಲ್ಲಿಯೇ ಕೋಡುಗಳನ್ನು ಹೊಂದಿರುವ ಲೋಪೊಫೊರ್ ಮತ್ತು ಇತರ ಅಂಗಗಳು ಇರುತ್ತವೆ. ಇದರಲ್ಲಿರುವ ಅಂಗಗಳಿಗೆಲ್ಲ ಒಟ್ಟಿಗೆ ಪಾಲಿಪೈಡ್ ಎನ್ನುತ್ತಾರೆ. ಈ ಗುಂಪನ್ನು ಅವುಗಳ ಜûುಯೀಷಿಯಂ ಮತ್ತು ಜûುಯಿಡ್‍ನಲ್ಲಿರುವ ವೈವಿಧ್ಯವನ್ನು ಅನುಸರಿಸಿ ವರ್ಗೀಕರಿಸಲಾಗಿದೆ. ಟೀನೊಸ್ಟೊಮಾಟ ವರ್ಗದಲ್ಲಿ ಜûುಯೀಷಿಯಂಗೆ ತೆಳುವಾದ ಕೈಟೆನ್ನಿನ ಹೊರಕವಚವಿದೆ. ಕೈಲೊಸ್ಟೊಮ್ಯಾಟದಲ್ಲಿ ಜûುಯೀಷಿಯಂನ ಹೊರಕವಚ ಪೆಟ್ಟಿಗೆಯಂತಿದೆ. ಇದರ ತುತ್ತತುದಿಯ ಕೆಳಗೆ ಒಂದು ಚಿಕ್ಕರಂಧ್ರವಿದೆ. ಈ ರಂಧ್ರಕ್ಕೆ ಕೀಲಿರುವ ಮುಚ್ಚಳವಿದೆ. ಈ ಮುಚ್ಚಳಕ್ಕೆ ಆಪರ್‍ಕುಲಂ ಎನ್ನುತ್ತಾರೆ. ಭ್ರೂಣಕೋಶ ಅಂಡಕೋಶದ ರೀತಿಯಲ್ಲಿದೆ. ಆನ್‍ಸ್ಕ ವರ್ಗದಲ್ಲಿ ಜûುಯೀಷಿಯಂನ ಮುಂಭಾಗದ ಗೋಡೆ ಹಿಗ್ಗಿ ಕುಗ್ಗುತ್ತದೆ.

ಚಿತ್ರ - ಂ ಪ್ಲೂಮಟಿಲ್ಲ ಪಂಕ್ಟೀಟ, ಃ ಪೆಕ್ಟಿನಟಿಲ್ಲ ಮ್ಯ್ಮಾಗ್ನಿಫಿಕ, ಅ ಕ್ರಿಸ್ಟೇಟಿಲ್ಲ ಮುಸಿಡೊ

	ಜûುಯಿಡ್‍ನ ಜೀವಂತ ಭಾಗ ಜûುಯೀಷಿಯಂನ ಒಳಗಡೆ ಇರುತ್ತದೆ. ಇದಕ್ಕೆ ಕೋಡುಗಳುಳ್ಳ ಲೋಪೊಫೋರ್ ಇರುತ್ತದೆ. ಇದರ ಮುಖ್ಯ ಅಂಗಗಳ ಗುಂಪು ಜûುಯೀಷಿಯಂನ ಒಳಗಡೆ ನೇತು ಹಾಕಿದಂತೆ ಇರುತ್ತದೆ. ಈ ಪಾಲಿಪೈಡಿಗೆ ಕೋಡಿನ ಕವಚವಿರುತ್ತದೆ. ಇದಕ್ಕೆ U ಆಕಾರದ ಜೀರ್ಣಾಂಗಗಳಿವೆ. ಇದರ ಬಾಯಿ ಕೋಡಿನ ವರ್ತುಳದಲ್ಲಿದೆ. ಆದರೆ ಇದರ ಗುದರಂಧ್ರ ಕೋಡಿನ ವರ್ತುಳದ ಹೊರವಲಯದಲ್ಲಿದೆ. ಜೀರ್ಣಾಂಗವನ್ನು ವಿವಿಧ ನಿಟ್ಟುಗಳಾಗಿ ವಿಂಗಡಿಸಬಹುದು. ಬಾಯಿ, ಗಂಟಲು, ಅನ್ನನಾಳ, ಜಠರ-ಹೀಗೆ. ಜಠರವನ್ನು ಕಾರ್ಡಿಯಾಕ್, ನೀಕಂ ಮತ್ತು ಪೈಲೊರಸ್ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಪೈಲೊರಸ್‍ನಿಂದ ಜೀರ್ಣಾಂಗನಾಳ ಗುದನಾಳವಾಗುತ್ತದೆ. ಕೋಡಿನ ವರ್ತುಳದ ಹೊರಗಡೆ ಇರುವ ಗುದರಂಧ್ರಕ್ಕೆ ಗುದನಾಳ ಸೇರುತ್ತದೆ. ಟೇನೋಸೈಟೂಟ ವರ್ಗದಲ್ಲಿ ಕಾರ್ಡಿಯಾಕ್ ಜಠರ, ಅರೆಯುವ ಅಂಗ ಗಿಜûರ್ಡ್ ಆಗಿ ಪರಿವರ್ತನೆ ಹೊಂದಿರುತ್ತದೆ. 

	ನರಮಂಡಲದ ಮುಖ್ಯ ಮುಡಿ ಗಂಟಲಿನ ಅಥವಾ ಅನ್ನನಾಳದ ಹತ್ತಿರ ದೇಹಾವಕಾಶದಲ್ಲಿದೆ. ಇಲ್ಲಿಂದ ನರಗಳು, ಉಪನರಗಳು, ಕೋಡುಗಳು, ಹೊರಕವಚ, ಮಾಂಸದ ಪೊರೆ ಮತ್ತು ಜೀರ್ಣಾಂಗಗಳಿಗೆ ಹೋಗುತ್ತವೆ.

	ಜûುಯೀಷಿಯಂನಲ್ಲಿರುವ ಪ್ರಾಣಿಯ ಮುಂಭಾಗವನ್ನು ಹೊರಗೆ ತಳ್ಳಲು, ಹಿಂದಕ್ಕೆ ಎಳೆದುಕೊಳ್ಳಲು ಅನುಕೂಲವಾಗುವಂತೆ ಸ್ನಾಯುಗಳಿವೆ. ಹೊರ ಮೈ ಕವಚದಿಂದ ಹಿಡಿದು ಮುಂಭಾಗದ ಪೊರೆಯವರೆಗೆ ಅಡ್ಡಲಾಗಿ ಹಾದುಹೋಗಿರುವ ಈ ಸ್ನಾಯುಗಳಿಗೆ ಪೆರೈಟಲ್ ಸ್ನಾಯುಗಳೆನ್ನುತ್ತಾರೆ. ಇವು ಕೋಡಿನ ಕವಚವನ್ನು ಹೊರಕ್ಕೆ ತಳ್ಳಲು ಸಹಾಯ ಮಾಡುತ್ತವೆ. ಈ ಸ್ನಾಯುಗಳು ಒಂದೇ ಕಟ್ಟಿನವಾಗಿರಬಹುದು ಅಥವಾ ಹಲವಾರು ಕಟ್ಟುಗಳಿಂದ ಕೂಡಿರಬಹುದು. ಇವುಗಳ ಸಂಖ್ಯೆ ಬೇರೆ ಬೇರೆ ಎಕ್ಟೋಪ್ರಾಕ್ಟದಲ್ಲಿ ಬೇರೆ ಬೇರೆಯಾಗಿರುತ್ತದೆ. ಬುಗುಲ ಪ್ರಾಣಿಯಲ್ಲಿ ಇಪ್ಪತ್ತರಿಂದ ನಲವತ್ತು ಜೋಡಿಗಳಿವೆ. ಆದರೆ ವಿಕ್ಟೊರೆಲ್ಲದಲ್ಲಿ ಕೇವಲ ಆರು ಜೋಡಿ ಮಾತ್ರವಿದೆ. ಜûುಯೀಷಿಯಂನ ಕವಾಟದ ಮುಚ್ಚಳವನ್ನು ಮುಚ್ಚಲು ಮತ್ತು ತೆರೆಯಲು ಅನುಕೂಲವಾಗುವಂತೆ ಅಕ್ಲುಸಾರ್ ಸ್ನಾಯುಗಳಿರುತ್ತವೆ. ಬಲಯುತವಾದ ರಿಟ್ರ್ಯಾಕ್ಟರ್ ಮತ್ತೊಂದು ಬಲಯುತವಾದ ಸ್ನಾಯು. ಇವು ಹೊರಗಿರುವ ಲೋಪೊಫೋರ್‍ಗೆ ಹೊಂದಿಕೊಂಡಿರುತ್ತವೆ. ಈ ಸ್ನಾಯುಗಳು ಸಂಕುಚಿತವಾದಾಗ ಹೊರಬಂದಿರುವ ಲೋಪೊಫೋರನ್ನು ಒಳಗೆ ಎಳೆದುಕೊಳ್ಳುತ್ತದೆ. ಈ ಸ್ನಾಯು ಸಂಕೋಚನಕ್ಕೆ ದೇಹದ ಒತ್ತಡದ ವ್ಯತ್ಯಾಸವೂ ಸಹಾಯ ಮಾಡುತ್ತದೆ.

	ಎಕ್ಟೋಪ್ರಾಕ್ಟ ವಂಶದಲ್ಲಿನ ಪ್ರಬುದ್ಧವಾದ ವೈಶಿಷ್ಟ್ಯವೇನೆಂದರೆ ಅದರ ಜûುಯಿಡ್‍ಗಳಲ್ಲಿನ ಬಹುರೂಪತೆ. ಇದು ಹೆಚ್ಚಾಗಿ ಕಂಡುಬರುವುದು ಜಿóಮ್‍ನೋಲಿಮಾಟ ಮತ್ತು ಕೈಲೊಸ್ಟೊಮ್ಯಾಟಗಳಲ್ಲಿ. ಚೆನ್ನಾಗಿ ಬೆಳೆದ, ಆಹಾರ ತಿನ್ನುವ ಎಲ್ಲ ಅಂಗಾಂಗಗಳುಳ್ಳ ಪಾಲಿಪೈಡ್ ಹೊಂದಿರುವ ಜûುಯಿಡ್‍ಗಳಿಗೆ ಆಟೊಜûುಯಿಡ್ ಎನ್ನುತ್ತಾರೆ. ಮಾರ್ಪಾಟಾಗಿರುವ ವಿವಿಧ ನಮೂನೆಯ ಇತರ ಜûುಯಿಡ್‍ಗಳಿಗೆ ಹೆಟರೊಜûುಯಿಡ್ ಎನ್ನುತ್ತಾರೆ. ಹೆಟರೊಜûುಯಿಡ್‍ನಲ್ಲಿ ಆಹಾರ ತೆಗೆದುಕೊಳ್ಳುವ-ಪೌಷ್ಟಿಕ ಮತ್ತು ಪ್ರಜನನ ಅಂಗಗಳು ಇರುವುದಿಲ್ಲ. ಈ ಹೆಟರೊಜûುಯಿಡ್‍ಗಳು ನಾಲ್ಕು ರೀತಿಯಲ್ಲಿವೆ. ಆವಿಕುಲೇರಿಯ, ವೈಬ್ರಾಕುಲ ಕಿನೋ ಜûುಯಿಡ್ ಮತ್ತು ಕುಬ್ಜ ಜûುಯಿಡ್.

	ಕೈಲೊಸ್ಟೊಮ್ಯಾಟದಲ್ಲಿ ಆವಿಕುಲೇರಿಯ ಮಾದರಿಯ ಹೆಟರೊಜûುಯಿಡ್‍ಗಳು ಹೆಚ್ಚಾಗಿವೆ. ಈ ಆವಿಕುಲೇರಿಯ ಮಿಕ್ಕ ಜûುಯಿಡ್‍ಗಳ ಆಶ್ರಯದಲ್ಲಿ ಬೆಳೆಯುತ್ತವೆ. ಈ ಆವಿಕುಲೇರಿಯ ಮಾರ್ಪಟ್ಟ ಜûುಯೀಷಿಯಂ. ಇವು ಜûುಯಿಡ್‍ಗಿಂತ ಚಿಕ್ಕದಾಗಿಯೊ ಅಷ್ಟೆ ಗಾತ್ರವಾಗಿಯೊ ಅಥವಾ ಅದಕ್ಕಿಂತ ದೊಡ್ಡದಾಗಿಯೊ ಇರುತ್ತವೆ. ಇದಕ್ಕೆ ಹೊಂದಿಕೊಂಡಂತೆ ಒಂದು ಮುಚ್ಚಳ ಇರುತ್ತದೆ. ಜûುಆಯಿಡ್‍ಗಿಂತ ಇದರ ಸ್ನಾಯುಗಳು ಸಂಕೀರ್ಣ, ಆವಿಕುಲೇರಿಯದ ಒಳಗಡೆ ಚೆನ್ನಾಗಿ ಬೆಳೆದ ಪಾಲಿಪೈಡ್ ಇರಬಹುದು ಅಥವಾ ಇಲ್ಲದಿರಬಹುದು. ಇವು ಚಿಕ್ಕದಾಗಿ ಆಟೊಜûುಯಿಡ್‍ನ ಮೇಲಿದ್ದರೆ ಇದಕ್ಕೆ ಅಡ್ವೆನ್‍ಟಿಷಿಯಸ್ ಅಥವಾ ಡಿಂಪೆಂಡೆಂಟ್ ಆವಿಕುಲೇರಿಯ ಎಂದು ಕರೆಯುತ್ತಾರೆ. ಬುಗುಲ ಪ್ರಾಣಿಯಲ್ಲಿ ಈ ಆವಿಕುಲಕ್ಕೆ ಒಂದು ತೊಟ್ಟಿದ್ದು ಅದು ಹಕ್ಕಿಯ ತಲೆಯನ್ನು ಹೋಲುತ್ತದೆ. ಇದರ ಮುಚ್ಚಳ ದೊಡ್ಡದಾಗಿದ್ದರೆ ಕೆಳದವಡೆ ಎನ್ನುತ್ತಾರೆ. ಈ ಕೆಳದವಡೆ ತಗಲುವ ಆವಿಕುಲೇರಿಯದ ಭಾಗಕ್ಕೆ ರೋಸ್ಟ್ರಂ ಎನ್ನುತ್ತಾರೆ. ಇದು ಹಕ್ಕಿಯ ಮೇಲ್ಭಾಗದ ಕೊಕ್ಕನ್ನು ಹೋಲುತ್ತದೆ. ನಕ್ಷತ್ರ ಮೀನು ಮತ್ತು ಸೀ ಆರ್ಚಿನ್‍ನಲ್ಲಿರುವ ಚಿಮಟದಂಥ ಪೆಡಿಸಿಲ್ಲೇರಿಯ ಮಾಡುವ ಕೆಲಸವನ್ನೇ ಈ ಬುಗುಲದಲ್ಲಿ ಆವಿಕುಲೇರಿಯ ಮಾಡುತ್ತದೆ. ಇವು ಮೈಮೇಲೆ ಓಡಾಡುವ ಸಣ್ಣ ಸಣ್ಣ ಪ್ರಾಣಿಗಳನ್ನು ಹಿಡಿದು ಹಾಕುತ್ತವೆ. ಕೊಕ್ಕಿನಂತಿರುವ ಈ ಆವಿಕುಲೇರಿಯ ಬಗ್ಗುತ್ತ ಚಟುವಟಿಕೆಯಿಂದ ಅಲ್ಲಾಡುತ್ತಿದ್ದು ಹತ್ತಿರಕ್ಕೆ ಬಂದ ಸಣ್ಣ ಸಣ್ಣ ಪ್ರಾಣಿಗಳನ್ನು ಕತ್ತರಿಸಿ, ಜûುಯೀಷಿಯಂನ ಹೊರ ಮೈಯನ್ನು ಶುಚಿಯಾಗಿಡುತ್ತದೆ. ತಮ್ಮ ಚಲನೆಯಿಂದ ಸಣ್ಣ ಪ್ರಾಣಿಗಳನ್ನು ಹಿಡಿದುಹಾಕಿ ಜûುಯಿಡ್‍ಗೆ ಆಹಾರ ಸಂಗ್ರಹಣೆಗೆ ಸಹಾಯ ಮಾಡುತ್ತವೆ. ಜೊತೆಗೆ ಹೊರ ಮೈಯನ್ನು ಚೊಕ್ಕಟಮಾಡಿ ಹೆಚ್ಚು ಆಮ್ಲಜನಕ ವಿನಿಮಯ ನಡೆಯುವಂತೆಯೂ ದೇಹವರ್ಧನ ಕ್ರಿಯೆಯಿಂದ ಉಂಟಾದ ತ್ಯಾಜ್ಯ ವಸ್ತುಗಳು ದೇಹದಿಂದ ಹೊರಹೋಗುವಂತೆಯೂ ಮಾಡುತ್ತವೆ.

	ಆವಿಕುಲದಂತೆ ಸಹಾಯ ಮಾಡುವ ಮತ್ತೊಂದು ಎಂದರೆ ಹೆಟರೊಜûುಯಿಡ್ ವೈಬ್ರಾಕುಲ. ಇದೂ ಮಾರ್ಪಾಟು ಹೊಂದಿದ ಜûುಯಿಡ್. ಇದರಲ್ಲಿ ಮುಚ್ಚಳ ಉದ್ದನೆಯ ಸಿಬಿರಿನಂತೆ ಮಾರ್ಪಾಟಾಗಿರುತ್ತದೆ. ಈ ಸಿಬಿರು ಚಿಕ್ಕದಾದೊಂದು ಕೋಶದಲ್ಲಿ ಅಡಕವಾಗಿದ್ದು ಎಲ್ಲ ಕಡೆಗೂ ಸ್ವತಂತ್ರವಾಗಿ ತಿರುಗುವಂತೆ ಇದೆ. ಇವು ಆವಿಕುಲದ ಜೊತೆಯಲ್ಲಿ ನಿಯೋಜಿತ ಸ್ಥಾನದಲ್ಲಿರಬಹುದು ಅಥವಾ ಸ್ವತಂತ್ರವಾಗಿರಬಹುದು. ಆವಿಕುಲ ಮತ್ತು ವೈಬ್ರಾಕುಲ ಇವೆರಡರ ಚಲನೆ ಎಕ್ಟೋಪ್ರಾಕ್ಟದ ಮೈಮೇಲೆ ಕೊಳೆ ಸೇರದಂತೆ ನೋಡಿಕೊಳ್ಳುತ್ತವೆ. ಕೀನೊಜûುಯಿಡ್‍ನಲ್ಲಿ ಮಾರ್ಪಾಟುಗಳು ಕಡಿಮೆ. ಇದರ ದೇಹಾವಕಾಶ ದೊಡ್ಡದು. ಇದರಲ್ಲಿ ಎಳೆಎಳೆಯಾದ ಅಂಗಾಂಶವಿದೆ. ಇದರಂತೆಯೇ ಕೆಲವು ಕುಬ್ಜ ಜûುಯಿಡ್‍ಗಳೂ (ನನ್ನೊಜûುಯಿಡ್) ಇವೆ.

	ಇದರ ಜನನೇಂದ್ರಿಯಗಳು ಕೇವಲ ಜನನಗ್ರಂಥಿಗಳನ್ನು ಮಾತ್ರ ಹೊಂದಿರುತ್ತವೆ. ಜನನ ಕೋಶಗಳನ್ನು ಗುಂಡಾದ ಆಕಾರ ಮತ್ತು ಅವು ಹೊಂದಿರುವ ದೊಡ್ಡದಾದ ನಡುಬೀಜದಿಂದ ಗುರುತಿಸಬಹುದು. ಈ ಜನನ ಕೋಶಗಳು ಜೀವಿಯ ಬೆಳವಣಿಗೆಯ ಕಾಲದಲ್ಲಿಯೆ ಜೀರ್ಣಾಂಗಗಳ ಕೆಳಗೂ ಹೊರಮೈಗೂ ಮಧ್ಯೆ ಇರುವ ಅವಕಾಶದಲ್ಲಿ ಬೆಳೆಯಲು ಪ್ರಾರಂಭವಾಗುತ್ತವೆ. ಇವುಗಳಲ್ಲಿ ಹೆಚ್ಚು ದ್ವಿಲಿಂಗಿಗಳು. ಪ್ರತಿ ಜûುಯಿಡ್‍ನಲ್ಲಿ ಒಂದೆರಡು ಅಂಡಾಶಯಗಳೊ ಒಂದೆರಡು ವೃಷಣಗಳೊ ಇರುತ್ತವೆ. ಸಾಮಾನ್ಯವಾಗಿ ವೃಷಣ ಜûುಯಿಡ್‍ನಲ್ಲಿರುವ ದೇಹಾವಕಾಶದ ಮುಂಭಾಗದಲ್ಲಿದ್ದರೆ ಅಂಡಾಶಯ ಅದೇ ಅವಕಾಶದ ಹಿಂಬದಿಯಲ್ಲಿರುತ್ತದೆ. ಆದರೆ ಇವು ಏಕಕಾಲದಲ್ಲಿ ಬಲಿಯದೆ, ಒಂದು ಮಾತ್ರ ಬೇಗ ಬಲಿಯುತ್ತದೆ. ಇದರಿಂದ ಸ್ವಕೀಯ ರೇತುಸ್ಪರ್ಶ ಆಗುವುದು ತಪ್ಪುತ್ತದೆ. ಕೆಲವು ಎಕ್ಟೋಪ್ರಾಕ್ಟಗಳು ಏಕಲಿಂಗ ಪ್ರಾಣಿಗಳು.

	ಎಕ್ಟೋಪ್ರಾಕ್ಟದಲ್ಲಿ ಸಾಮಾನ್ಯವಾಗಿ ದೇಹದ ಒಳಗಡೆಯೇ ಗರ್ಭ ಕಟ್ಟುತ್ತದೆ. ಆದರೆ ಹೆಚ್ಚು ಪ್ರಾಣಿಗಳಲ್ಲಿ ಒಂದು ಭ್ರೂಣಕೋಶವಿದ್ದು ಅದರೊಳಗೆ ಗರ್ಭ ಬೆಳೆಯುತ್ತದೆ. ಈ ಭ್ರೂಣಕೋಶ ಗೆಡ್ಡೆಯಾಕಾರದಲ್ಲಿ ದೇಹದ ಹೊರಗೆ ಅಥವಾ ದೇಹಾವಕಾಶದಲ್ಲಿ ಬೆಳೆಯಬಹುದು. ಜûುಯೀಷಿಯಂನಂಥ ಕೆಲವು ಪ್ರಾಣಿಗಳಲ್ಲಿ ಹೊರ ಆವರಣದಲ್ಲಿ ಓವಿಸೆಲ್ ಅಥವಾ ಈಸಿಯಂ ಎಂಬ ಭ್ರೂಣಕೋಶವಿರುತ್ತದೆ. ಇದು ಶಿರಾಸ್ತ್ರದ ಆಕಾರವಾಗಿದ್ದು ಕೆಲವು ಆಟೊ ಜûುಯಿಡ್‍ನ ಮುಂಭಾಗದಲ್ಲಿ ಮೇಲುಗಡೆ ಇರುತ್ತದೆ. ಈ ಓವಿಸೆಲ್‍ನ ಬೆಳೆವಣಿಗೆ ಅಂಡಾಶಯ ಉತ್ಪತ್ತಿ ಮಾಡುವ ಚೇದಕಗಳನ್ನು ಅನುಸರಿಸಿರುತ್ತದೆ. ಈ ಓವಿಸೆಲ್‍ನಲ್ಲಿ ಬೆಳೆದ ಭ್ರೂಣ ಮಂದೆ ಶಿಲಕಗಳಿಂದ ಕೂಡಿದ ಡಿಂಬವಾಗಿ ಮಾರ್ಪಾಡಾಗುತ್ತದೆ. ಈ ಡಿಂಭ ಬೆಳೆದ ಮೇಲೆ ಓವಿಸೆಲ್‍ನಿಂದ ಹೊರಗೆ ಬಂದ ನೀರು ಸೇರುತ್ತದೆ. ಮುಮ್ಮೂಲೆಯಾಕಾರದ ಈ ಡಿಂಭವನ್ನು ಸೈಫೊನಾಟಸ್ ಡಿಂಭ ಎನ್ನುತ್ತಾರೆ. ಇದು ಸುಮಾರು ಎರಡು ತಿಂಗಳವರೆಗೆ ಈಜಾಡಿಕೊಂಡಿದ್ದು ಅನಂತರ ಅನುಕೂಲವಾದ ಜಾಗಕ್ಕೆ ಅಂಟಿಕೊಂಡು ಅದರ ಹೊರ ಕವಚವನ್ನು ಕಳಚಿಕೊಂಡು ರೂಪ ಪರಿವರ್ತನೆ ಹೊಂದುತ್ತದೆ. ಭ್ರೂಣಕೋಶದಿಂದ ಹೊರಬಂದ ಡಿಂಭಗಳಲ್ಲಿ ಮಾತ್ರ ಈ ಸ್ವಚ್ಛಂದ ಜೀವನದ ಅವಧಿ ಕೇವಲ ಕೆಲವೇ ದಿವಸಗಳು. ತಲೆಯಲ್ಲಿರುವ ಅಲುಗಾಡುವ ಗರಿಗಳಿಂದ ಜಾಗವನ್ನು ಪರೀಕ್ಷಿಸಿ ಡಿಂಭಗಳು ಅಲ್ಲಿ ನೆಲಸುತ್ತವೆ. ಅವುಗಳ ಅದರುವ ಸ್ನಾಯು ಸಂಕೋಚದಿಂದ ಅಂಟಿನ ಕೋಶವನ್ನು ಹೊರದೂಡುತ್ತದೆ. ಗಟ್ಟಿ ಜಾಗದ ಮೇಲೆ ಅದು ಹರಡಿಕೊಂಡಾಗ ದೇಹದ ಇತರ ಭಾಗಗಳು ನಶಿಸಲು ಪ್ರಾರಂಭಿಸುತ್ತವೆ. ಅನಂತರ ಅದು ನೂತನವಾದ ಮೊದಲನೆಯ ಜûುಆಯಿಡ್ ಆಗಿ ಮಾರ್ಪಾಡುತ್ತದೆ. ಇದಕ್ಕೆ ಆನ್‍ಸೆಸ್ಟ್ರುಲ್ಲ ಎಂದು ಹೆಸರು. ಈ ಆನ್‍ಸೆಸ್ಟ್ರುಲ್ಲದ ಪಾಶ್ರ್ವದಿಂದ ಹೊಸ ಹೊಸ ಜûುಆಯಿಡ್‍ಗಳು ಮೊಗ್ಗು ಒಡೆದಂತೆ ಚಿಗುರುತ್ತವೆ. ಹೊಸ ಜûುಯಿಡ್‍ಗಳ ಬೆಳೆವಣಿಗೆ ಈ ರೀತಿ ಪ್ರತಿ ಪ್ರಭೇದದಲ್ಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕಠಿಣ ವಾತಾವರಣ ಉಂಟಾದಾಗ ಈ ಸಂಘಜೀವಿಗಳು ಕಂದುಬಣ್ಣದ ಪದಾರ್ಥವಾಗಿ ನಿಶ್ಚೇತನ ಸ್ಥಿತಿಗೆ ಇಳಿಯುತ್ತವೆ. ಮತ್ತೆ ಅನುಕೂಲ ವಾತಾವರಣ ಉಂಟಾದಾಗ ಇವು ಜûುಯಿಡ್‍ಗಳಾಗಿ ಬದಲಾಗುತ್ತವೆ.

	ಎಕ್ಟೋಪ್ರಾಕ್ಟವನ್ನು ಜಾಗರೂಕತೆಯಿಂದ ಪರೀಕ್ಷಿಸಿದ, ಬುಗೆ (1952) ಮತ್ತು ಬುಸ್‍ಲರ್ (1953) ಇವರು ಈ ಪ್ರಾಣಿಗಳು ಪ್ರೀ ಕೇಂಬ್ರಿಯನ್ ಕಾಲದಲ್ಲೇ ಚೆನ್ನಾಗಿ ವೃದ್ಧಿಯಾಗಿದ್ದವೆಂದು ನಿರ್ಧರಿಸಿದ್ದಾರೆ. ಆಗಲೇ ಇವು ಸಾಕಷ್ಟು ವೈವಿಧ್ಯವನ್ನು ಹೊಂದಿದ್ದು ಮೀಸೊಜೋಯಿಕ್ ಶಕದಲ್ಲಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದುವು. ಭ್ರೂಣ ಬೆಳೆವಣಿಗೆಯ ಕ್ರಮ, ಡಿಂಬ ಲಕ್ಷಣಗಳು ಮತ್ತು ದೇಹ ರಚನೆಯ ವೈಶಿಷ್ಟ್ಯ- ಇವನ್ನು ವಿವೇಚಿಸಿದರೆ ಈ ಗುಂಪು ಫೋರೋನಿಡಕ್ಕೆ ನಿಕಟ ಸಂಬಂಧವನ್ನು ಹೊಂದಿದ್ದು ಪ್ರೋಟೊಸ್ಟೋಮಿಯ ಗುಂಪಿಗೆ ಸೇರುವುದೆಂದು ಹೈಮನ್ ನಿರ್ಧರಿಸಿದ್ದಾಳೆ.				

	(ಸಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ